Thursday, February 12, 2015

ಬಾನು 
ಬಾವಿಯ ತಳ ಕಾಣುವ 
ಕಾತರದಲ್ಲಿದ್ದರೂ..... 
ಎಷ್ಟರಮಟ್ಟಿಗೆ ಹಿಡಿದಿಟ್ಟುಕೊಂಡಿತೂ.. 
ಕಾರ್ಮುಗಿಲು ಕೆನೆಗಟ್ಟಿದ
ಮಳೆ .

ಪಾತಾಳಕ್ಕಿಳಿದ ಬಾವಿ
ಹನಿ ಹನಿ ಒರತೆ ಜಿನುಗಿ
ಕಾಪಾಡಿಕೊಂಡಿದೆ
ತಳಮಟ್ಟ
ಮಾನ .

ಬಿಸಿಲು ಮಳೆಯಾಟಕ್ಕೆ
ಹೊಮ್ಮಿದೆ ಕಾಮನಬಿಲ್ಲು
ಅದರಲ್ಲೊಂದು ಹೊಸ ಬಣ್ಣ
ಬೆದರಿದ ಇಬ್ಬನಿ ಬೆವರಿ
ಅವನೆದೆಯ ಮೇಲೆ
ಸಾಲು ಸಾಲು .

ಹಾಗೇ ಒಂದು ಜೀವಚಿತ್ರವಾಗಿಬಿಡಲಿ
ಮುಂಗಾರು ಮಳೆ
ಕಂಗಾಲದ ಬೆಂಗಾಡು ಬುವಿಗೆ
ಆಸರೆ ಹಸಿರು ಹುಲ್ಲ ಮೊಳೆ

ತಾಳಿ
ಇನ್ನೂ ಹಸಿಯಾಗಿದೆ
ಕಚ್ಚಿಕೊಂಡ ತಳಿಕೆ ..
ತಾಳೆ ಹೂವ ಗರಿಯಲ್ಲಿ.



-- ರಾಘವೇ೦ದ್ರ ಹೆಗಡೆಕರ್